ಉದಂತ ಮಾರ್ತಂಡ: ಹಿಂದಿ ಭಾಷೆಯಲ್ಲಿ ಪ್ರಕಟವಾದ (1826) ಪ್ರಥಮ ವಾರಪತ್ರಿಕೆ. ಯುಗಲಕಿಶೋರ್ ಶುಕ್ಲ ಇದರ ಸಂಪಾದಕ ಮತ್ತು ಪ್ರಕಾಶಕ. ಪತ್ರಿಕೆಯ ಕಛೇರಿ ಕಲ್ಕತ್ತೆಯಲ್ಲಿತ್ತು. ಹಣದ ಅಭಾವವಿದ್ದುದರಿಂದಲೂ ಸರ್ಕಾರ ಮತ್ತು ಜನತೆಯ ಪ್ರೋತ್ಸಾಹ ಸಾಕಷ್ಟು ಸಿಕ್ಕದುದರಿಂದಲೂ ಎರಡು ವರ್ಷಗಳಲ್ಲಿ ಪತ್ರಿಕೆ ನಿಂತು ಹೋಯಿತು. ಮುಂದೆ ಶುಕ್ಲರೇ 1850-51ರಲ್ಲಿ ಸಾಮ್ಯದಂತ ಮಾರ್ತಾಂಡ ಎಂಬ ಪತ್ರಿಕೆ ಹೊರಡಿಸಿದರು. ಆದರೆ ಅದೂ ಬಲು ಬೇಗ ನಿಂತುಹೋಯಿತು. == ಉಲ್ಲೇಖಗಳು ==